Current Date 28 Jul, 2026

"ಎಲ್ಲವೂ ಸರಿ ಹೋಗುವ ಮೊದಲು ಬಹಳಷ್ಟು ತಪ್ಪಾಗುತ್ತದೆ"; ಸುಮಲತಾ ಪೋಸ್ಟ್ ವೈರಲ್

ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ಮೌನಕ್ಕೆ ಜಾರಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿರುವ ಬಗ್ಗೆ ಕೂಡ ಈವರೆಗೆ ಪ್ರತಿಕ್ರಿಯಿಸಿಲ್ಲ. ದರ್ಶನ್ ನನ್ನ ದೊಡ್ಡ ಮಗ ಎಂದೇ ಸುಮಲತಾ ಹೇಳುತ್ತಿರುತ್ತಾರೆ. ದರ್ಶನ್ ಸಹ ಮದರ್ ಇಂಡಿಯಾ ಎಂದೇ ಅವರನ್ನು ಕರೆಯುತ್ತಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಸಾಕಷ್ಟು ಜನ ಕಲಾವಿದರು ಇಂದಿಗೂ ಮೌನವಾಗಿಯೇ ಇದ್ದಾರೆ. ಅದರಲ್ಲೂ ದರ್ಶನ್‌ಗೆ ಬಹಳ ಆಪ್ತರಾಗಿದ್ದವರೇ ಸೈಲೆಂಟ್ ಆಗಿರುವುದು ಚರ್ಚೆಗೆ ಕಾರಣವಾಗಿದೆ. ದರ್ಶನ್‌ ಬಳಿ ಸಹಾಯ ಪಡೆದವರು ಈಗ ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸುವವರು ಇದ್ದಾರೆ. ಸುಮಲತಾ, ಅಭಿಷೇಕ್ ಅಂಬರೀಶ್, ಧನ್ವೀರ್ ಸೇರಿದಂತೆ ಕೆಲವರು ಇನ್ನು ಮಾತನಾಡುವ ಗೋಜಿಗೆ ಹೋಗಲಿಲ್ಲ